ನಮ್ಮಬೆಂಗಳೂರು ನಮ್ಮಹೆಮ್ಮೆ!

#ನಮ್ಮಬೆಂಗಳೂರು_ನಮ್ಮಹೆಮ್ಮೆ
#OurBengaluru_OurPride

ದೀಪದ ಕೆಳಗೆ ಸಣ್ಣ ಕತ್ತಲು ಇರುವುದು ಸಹಜ, ಆದರೆ ಆ ದೀಪದ ಬೆಳಕು ಎಷ್ಟು ದೂರ ಹರಡಿರುತ್ತೆ ಅನ್ನೋದು ಪರಿಗಣಿಸಬೇಕು. ಅದೇ ರೀತಿ #ನಮ್ಮಬೆಂಗಳೂರು ವಿಶ್ವ ಮಟ್ಟದಲ್ಲಿ ಒಂದು ಆರದ ದೀಪವಾಗಿ ಪ್ರಜ್ವಲಿಸುತ್ತಿದೆ. ಆ ಬೆಳಕಿನಲ್ಲಿ ನನ್ನಂತ ಲಕ್ಷಾಂತರ ಜನ ವಿಶ್ವ ಮಟ್ಟದಲ್ಲಿ ತಲೆ ಎತ್ತಲು ಸಾದನವಾಗಿ ಬಳಸಿಕೊಂಡಿದ್ದೀವಿ. ಆ ಮಣ್ಣಿನ ಋಣ ತೀರಿಸುವುದಕ್ಕೆ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಕೃತಜ್ಞಾರಾಗಿರಬೇಕು ಅನ್ನೋದು ನನ್ನ ಅಭಿಪ್ರಾಯ. ಅದನ್ನು ಬಿಟ್ಟು ಉರಿಯುವ ದೀಪ ಆರಿಸೋ ಪ್ರಯತ್ನ ಮಾಡಿದರೆ ದೀಪಕ್ಕೆ ಸುಡುವ ಶಕ್ತಿಯೂ ಇದೆ ಅನ್ನೋದು ಮರೀಬೇಡಿ. ಯಾರೋ ಕೆಲವು ಕಿಡಿಗೇಡಿಗಳು ಕುಡಿದ ಅಮಲಿನಲ್ಲಿ ಮಾಡಿದ ದುಷ್ಕೃತ್ಯಕ್ಕೆ ಇಡೀ ನಗರವನ್ನು ದೂಷಿಸುವದು ವಿಕೃತ ಅನ್ನಿಸುತ್ತದೆ ಅಲ್ಲವಾ. ಸ್ವಲ್ಪವಾದರೂ ಮಾನವೀಯ ಮೌಲ್ಯಗಳಿಗೆ ಬೆಲೆ ಇರಲಿ. ಸೋಷಿಯಲ್ ಮೀಡಿಯಾ ಇದೆ ಅಂತ ಬೇಕಾದ್ದು ಬರೆಯೋ ಬದಲು ಸ್ವಲ್ಪ ನಿಮ್ಮ ತಲೆಗೂ ಕೆಲಸ ಕೊಡಿ.
ಕೊನೆಯಲ್ಲಿ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಒಂದು ವಿನಂತಿ, ಟಿ ರ್ ಪಿ ಗೋಸ್ಕರ ಹೆತ್ತಮ್ಮನನ್ನು ಬೆತ್ತಲೆ ಮಾಡುವುದನ್ನು ಬಿಡಿ. ಇಲ್ಲವಾದರೆ ನಿಮ್ಮ ಆಫೀಸ್ ಗಳನ್ನು ಬಿಹಾರ ಅಥವಾ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಿ, ನಿಮಗೆ ಜ಼ಡ್ ಸೆಕ್ಯುರಿಟಿ ಕೊಡುತ್ತಾರೆ.

#ಹೆಮ್ಮೆಯ ಬೆಂಗಳೊರಿಗ
#way2ravi

(262)