ಪುಷ್ಪಕ ವಿಮಾನ ಚಿತ್ರ ವಿಮರ್ಶೆ

ಪುಷ್ಪಕ ವಿಮಾನ

 

ರಮೇಶ್ ಅರವಿಂದ್ ರವರ 100 ನೇ ಚಿತ್ರ, ಪುಷ್ಪಕ ವಿಮಾನ ನೋಡುಗರಲ್ಲಿ ಮಿಶ್ರ ಭಾವ ನೀಡುತ್ತದೆ, ಹೊಸ ವರ್ಷಕ್ಕೆ ಒಂದು ಒಳ್ಳೆಯ ಉಡುಗೊರೆ ಎನ್ನಬಹುದು.

ಬುದ್ದಿ ಮಾಂದ್ಯ ತಂದೆ ಹಾಗೂ ಮುದ್ದು ಮಗಳ ಬಾಂದವ್ಯ ವನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ.

 

ರಮೇಶ್ ಅಭಿನಯವಂತೂ ಅಮೋಗವಾಗಿದೆ. ಅವರ 100ನೇ ಚಿತ್ರಕ್ಕೆ ಇದಕ್ಕಿಂತ ಒಳ್ಳೆ ಪಾತ್ರ ಬೇರಿಲ್ಲ ಎನ್ನಬಹುದು. ಸಾಮಾನ್ಯವಾಗಿ ರಮೇಶ್ ಅಭಿನಯದ ಚಲನ ಚಿತ್ರವೆಂದರೆ ಭಾವನಾತ್ಮಕ ಎಂದೆನಿಸುತ್ತದೆ, ಈ ಚಿತ್ರ ನಗು ಹಾಗೂ ಅಳು ಎರಡು ತರಿಸುತ್ತದೆ. ಇಡೀ ಕುಟುಂಬ ಕೂತು ನೋಡಬಹುದಾದ ಅದ್ಭುತ ಚಿತ್ರ.

ಇನ್ನು ಪುಟಾಣಿ ಯುವಿನ, ನಟನೆ ಅಂತ ಆಳವಾಗಿ ಕಂಡುಬಂದಿಲ್ಲವಾದರೂ ನೋಡುವುದಕ್ಕೆ ತುಂಬಾ ಮುದ್ದಾಗಿದ್ದಾಳೆ. ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ.

 

pushpaka-vimana_145310009340
ರಚಿತರಾಮ್ ನೊಂದಿಗೆ ಶುರುವಾಗುತ್ತದೆ. ಆಕೆ ತನ್ನ ಹಿಂದಿನ ನೆನೆಪನ್ನು ಮರುಕಳಿಸುತ್ತಾ ರಮೇಶ್ ಹಾಗೂ ಯುವಿನ ,ತಂದೆ ಮಗಳ ಕತೆ ಶುರುವಾಗುತ್ತದೆ. ಜೀವನ ಚೆನ್ನಾಗಿ ಸಾಗುತ್ತಿರುತ್ತದೆ. ಯಾವಾಗ ತಂದೆ ವಿಮಾನದ ಆಟಿಕೆಯನ್ನು ತನ್ನ ಮಗಳಿಗೆ ಉಡುಗೊರೆ ಕೊಡಲೇಬೇಕೆಂಬ ಕೆಟ್ಟದಾದ ಹಟಶುರುವಾಗುವತನಕ ಎಲ್ಲಾ ಸರಿ ಇರುತ್ತದೆ. ನಂತರ ಕೆಲವು ದುರಾದೃಷ್ಟಕರ ಗಟನೆಗಳಿಂದ ರಮೇಶ್ ಜೈಲು ಸೇರುವಂತಾಗುತ್ತದೆ. ಅಲ್ಲಿಯೂ ತನ್ನ ಮುಗ್ದ ಹಾಗೂ ಪ್ರಾಮಾಣಿಕ ತನದಿಂದ ಎಲ್ಲರ ಮನಸ್ಸು ಗೆಲ್ಲುತ್ತಾನೆ. ಆದರೆ ಮಗಳನ್ನು ನೋಡಲೇಬೇಕೆಂಬ ಹಂಬಲ, ಕೈದಿಗಳ ಜೊತೆಗಿನ ಆ ಸಂಬಂದ , ನ್ಯಾಯಕ್ಕಾಗಿ ಆತನ ಹೋರಾಟ ಹೃದಯ ಹಿಂಡುವಂತಹ ಸನ್ನಿವೇಶಗಳು ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರು ತರುವಂತೆ ಮಾಡುತ್ತದೆ.
ಚಿತ್ರದ ಎರಡನೇ ಭಾಗ ಸ್ವಲ್ಪ ನಿಧಾನ ಎನಿಸಿದರೂ, ಚಿತ್ರದಲ್ಲಿ ಆರಿಸಿರಿವ ಭಾವಗೀತೆಗಳು ಮನಸ್ಸಿಗೆ ಮುದನೀಡುವಂತಿದೆ. Life Is Beautiful and Miracle in Cell No 7 ಚಿತ್ರಗಳ ರಿಮೇಕ್ ಆದರೂ ನಿರ್ದೇಶಕ ಎಸ್. ರವೀಂದ್ರನಾಥ್ ರವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ, ಚಿತ್ರ ತಾಂತ್ರಿಕವಾಗಿ ಒಳ್ಳೆಯ ಅಂಕ ಪಡೆಯುತ್ತದೆ. ಛಾಯಾಗ್ರಹಣ, ಸಂಭಾಷಣೆ, ಜೂಹಿ ಚಾವ್ಲಾ ರವರ ನೃತ್ಯ ಎಲ್ಲಾ ಚೆನ್ನಾಗಿದೆ.

ಮನೆಮಂದಿ ಎಲ್ಲ ಒಮ್ಮೆ ನೋಡಲೇ ಬೇಕಾದ ಅದ್ಭುತವಾದ ಚಿತ್ರ ಈ ಪುಷ್ಪಕ ವಿಮಾನ.
(1455)